Monday, 18 December 2017

Nannade Kogileya Kannada Song Lyrics

Nannade Kogileya Kannada Song Lyrics


ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ
ನೀ ತ೦ದೆ

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ
ನೀ ತ೦ದೆ

ಏಕೋ ಏನೋ ಕಾಣೇ ನಾನು
ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲೂ

ಏಕೋ ಏನೋ ಕಾಣೇ ನಾನು
ಎದುರಲಿ ನೀನಿರಲು
ಮನದಲಿ ಸ೦ತೋಷದ
ಹೊನಲು ಹರಿಯಲೂ

ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು
ನಿನ್ನಿ೦ದ

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ
ನೀ ತ೦ದೆ

ತಾಳೂ ತಾಳು ನಲ್ಲ ನಿಲ್ಲು

ತಾಳೂ ತಾಳು ನಲ್ಲ ನಾನು
ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ತಾಳೂ ತಾಳು ನಲ್ಲ ನಾನು
ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದಾ
ನೋವನ್ನು

ನನ್ನೆದೆ ಕೋಗಿಲೆಯಾ
ಒಲವಿನ ಪಲ್ಲವಿಯಾ
ದನಿಯಲಿ ವಿನೂತನ
ಜೀವ ಭಾವ
ನೀ ತ೦ದೆ

Poojisalende Hugala Thande Kannada Song Lyrics

Poojisalende Hugala Thande Kannada Song Lyrics


ಆ......ಆ.......ಆ......
ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ತೆರೆಯೋ ಬಾಗಿಲನು ರಾಮ...
ತೆರೆಯೋ ಬಾಗಿಲನು ರಾಮ...

ಪೂಜಿಸಲೆಂದೇ ಹೂಗಳ ತಂದೆ

ಮೋಡದಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ.....ಆ.....ಅ.....
ಮಾಣಿಕ್ಯದಾರತಿ ಉಷೆತಂದಿಹಳು
ತಾಮಸವೇಕಿನ್ನು ಸ್ವಾಮಿ....
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ಪೂಜಿಸಲೆಂದೇ ಹೂಗಳ ತಂದೆ

ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ - 2
ಸ್ವೀಕರಿಸು ನನ್ನಾ...ಸ್ವಾಮಿ
ತೆರೆಯೋ ಬಾಗಿಲನು ರಾಮ.....

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ....

Huvinda Huvige Haaruva Dumbi Kannada Song Lyrics

Huvinda Huvige Haaruva Dumbi Kannada Song Lyrics


ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ ||
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ … ||

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

ಆ…ಆ…ಆ… ಆ…ಆ…ಆ…
ಆ…..ಆ…..ಆ….ಆ…..

ಆಸೆಯ ತುಂಬಿ ಹೂವರಳಿರಲು
ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ
ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿಉಲಿದು
ಒಲಿಸುವ ರಾಗವ ನೀ ಉಲಿಉಲಿದು
ಏನನು ಬಯಸುತಿಹೆ ನೀ………

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ ||
ಹೂವಿಂದ ಹೂವಿಗೆ ಹಾರುವ ದುಂಬಿ……

ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕೋ ಪ್ರೇಮ ಸಮಾಗಮ
ಹೂವಿಗು ದುಂಬಿಗು ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ……..

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ … ||

ಹೂವಿಂದ ಹೂವಿಗೆ ಹಾರುವ ದುಂಬಿ