Tuesday, 7 March 2023

Tamburi Mitidava

 ರಚನೆ : ಪುರಂದರದಾಸರು

ರಾಗ : ಸಿಂಧುಭೈರವಿ
ತಾಳ : ಆದಿ

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ

ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ ಹರಿ-ಮೂರುತಿ ನೋಡಿದವ

ವಿಠ್ಠಲನ ನೋಡಿದವ
(ಪುರಂದರ) ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ

 

Nanati Bathuku Lyrics in Kannada

Nanati Bathuku Lyrics in Kannada:

wrote by Annamacharya.


ನಾನಾಟಿ ಬತುಕು ನಾಟಕಮು

ಕಾನಕ ಕನ್ನದಿ ಕೈವಲ್ಯಮು ||

ಪುಟ್ಟುಟಯು ನಿಜಮು, ಪೋವುಟಯು ನಿಜಮು

ನಟ್ಟನಡಿಮೀ ಪನಿ ನಾಟಕಮು |

ಯೆಟ್ಟನೆದುಟಿ ಕಲದೀ ಪ್ರಪಂಚಮು

ಕಟ್ಟ ಗಡಪಟಿದಿ ಕೈವಲ್ಯಮು ||

ತೆಗದು ಪಾಪಮು, ತೀರದು ಪುಣ್ಯಮು

ನಗಿ ನಗಿ ಕಾಲಮು ನಾಟಕಮು |

ಎಗುವನೇ ಶ್ರೀ ವೇಂಕಟೇಶ್ವರುಡೇಲಿಕ

ಗಗನಮು ಮೀದಿದಿ ಕೈವಲ್ಯಮು ||

Monday, 13 September 2021

Ee Hasiru Siriyali Kannada song lyrics

 Ee Hasiru Siriyali   ಈ ಹಸಿರು ಸಿರಿಯಲಿ


ಸಂಗೀತ: ಸಿ.ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ.. ನವಿಲೆ
ಈ ನೆಲದ ನೆಲೆಯಲಿ ಮನಸು ಕುಣಿಯಲಿ
ನವಿಲೇ...
ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ
ನವಿಲೇ.. ನವಿಲೆ

ತಂಗಾಳಿ ಬೀಸಿ ಬರದೆ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ
ನಿನ್ನ ಗೆಳತಿ ನಾನು ಮೊರೆವೆ

ತಂಗಾಳಿ ಬೀಸಿ ಬರದೇ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೇ
ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ
ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ
ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ

ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ
ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ
ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ
ನವಿಲೇ ನವಿಲೆ
ನವಿಲೇ ನವಿಲೆ