Saturday, 8 April 2017

Akasha deepavu neenu lyrics


ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ

ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು - 2

ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ

ಆನಂದ ತುಂಬಲು ನೀನು... ನಾ ನಲಿದೆನು...

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ - 2

ಹೃದಯವೂ ಧರಿಸಿದೆ... ಈ ಜೀವ ಸೋಲುತಿದೆ

ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ

ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ

ನಿನ್ನ ಕಂಡಾಗ ಸಂತೋಷವೇನೂ

8 comments: