Friday 7 April 2017

Jolly Days Kannada - Raktha Sambandhagala meerida bandhavidu

ಚಿತ್ರ:ಜಾಲಿ ಡೇಸ್
ಗಾಯನ:ಕಾರ್ತಿಕ್
ಸಂಗೀತ:ಮಿಕ್ಕಿ ಜೆ. ಮೇಯರ‍್
ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲು ಸಂದಿಸಿಹುವುದು
ಚಾಚಿ ಕೋಡುಗಳನ್ನು ಬಿಗಿದಪ್ಪು ಕೊಳ್ಳುವುದು
ನಮ್ಮ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಕಣ್ಣ ಕಂಬನಿಯ ಒರೆಸುವ ಸ್ನೇಹ ...ನಮ್ಮ ಸ್ನೇಹವಿದು ಇರಲಿ ಶಾಶ್ವತ ...
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು ಹಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು ಲೋ ಲೋ ಅಂತ ಈಗ ಬದಲು
ನಮ್ಮ ನಡುವೆ ಎಲ್ಲ ಕೊಂಚ ಸಂತೋಷವು ..
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು.
ಕಣ್ಣ ಕಂಬನಿಯ ಒರೆಸುವ ಸ್ನೇಹ ... ನಮ್ಮ ಸ್ನೇಹವಿದು ಇರಲಿ ಶಾಶ್ವತ ..
ಮಳೆಯೂ ಬರಲು ಕಾಗದನೆ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯ ವೆಲ್ಲ ಆಟ ಮತ್ತೆ ಆಡೋ ಹುರುಪು
ತುಂಟ ತನವು ಸೇರಿ ನಮ್ಮ ಸಂಗದಲ್ಲಿ ಪಟ್ಟ ಕುಶಿಗೆ ಲೆಕ್ಕ ಎಲ್ಲಿ
ತಿಳಿಸೋ ಬಗೆಯೇ ಅರಿಯೆ ನಿ೦ಗೆ ಧನ್ಯವಾದವೇ ..
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಕಣ್ಣ ಕಂಬನಿಯ ಒರೆಸುವ ಸ್ನೇಹ ..... ನಮ್ಮ ಸ್ನೇಹವಿದು ಇರಲಿ ಶಾಶ್ವತ

No comments:

Post a Comment