Sunday, 23 April 2017

Elu Shiva Elu Shiva Kannada Song

ಚಿತ್ರ: ಹಾಲುಂಡ ತವರು (೧೯೯೪/1994)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಚಿತ್ರಾ

ಏಳು ಶಿವ ಏಳು ಶಿವ
ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ
ಬಾಳ ಬಂಡಿ ಹೂಡು ಶಿವ

ಭೂಮಿ ನಮ್ಮ ಆಲಯ
ಭೂಮಿ ನಮ್ಮ ಆಲಯ
ಕಾಯಕವೇ ದೇವರು
ದೇವರಿಗೆ ಸೂರ್ಯನದೆ ಆರತಿ
ಗುಡಿಯ ಶಿವ ನಲಿಯೊ ಶಿವ
ಕಾಮ ಕ್ರೋಧ ಎಸೆದು ಮೇಲೆ

ಏಳು ಶಿವ ಏಳು ಶಿವ
ಬಾಳ ಬಂಡಿ ಹೂಡು ಶಿವ

ಬಾಳ ಬಂಡಿ ಎಳೆಯಲು
ಬಾಳ ಬಂಡಿ ಎಳೆಯಲು
ಪ್ರೇಮವೆಂಬ ಭೂಮಿಗೆ
ಪಾಪಗಳ ವ್ಯಾಘ್ರಗಳ ಹೂಡದೆ
ಮನದ ಹೊಲ ಉಳುವ ಛಲ
ಕಣ್ಣ ತುಂಬ ತುಂಬಿ ಕೊಂಡು

ಏಳು ಶಿವ ಏಳು ಶಿವ
ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ
ಬಾಳ ಬಂಡಿ ಹೂಡು ಶಿವ

No comments:

Post a Comment