Wednesday, 19 April 2017

jagadeesha sarvesha song lyrics in kannada

jagadeesha sarvesha song lyrics in kannada


ಜಗದೀಶ ಸರ್ವೇಶ ಮಲ್ಲೇಶ ಗೌರೀಶ....
ನೂರಾರು ಹೆಸರು ಶಿವನೀಗೆ...
ನೂರಾರು ಹೆಸರು ನಂಜುಂಡೇಶ್ವರನೀಗೆ...
ಇರುವನು ನೆನೆದೋರ ಮನದಾಗೆ....

ಜಗದೀಶ ಸರ್ವೇಶ ಮಲ್ಲೇಶ ಗೌರೀಶ...
ನೂರಾರು ಹೆಸರು ಶಿವನೀಗೆ...
ನೂರಾರು ಹೆಸರು ನಂಜುಂಡೇಶ್ವರನೀಗೆ....
ಇರುವನು ನೆನೆದೋರ ಮನದಾಗೆ....

ಮೊಗ್ಗಲ್ಲಿ ಕುಳಿತವ್ನೆ..  ಹೂವಲ್ಲಿ ನಗುತಾನೆ...
ಮಾಲ್ಯಾಗೆ ಹಾಯಾಗಿ ಮಲಗವ್ನೆ...
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ...
ಮಾಲ್ಯಾಗೆ ಹಾಯಾಗಿ ಮಲಗವ್ನೆ...
ಮಾಲ್ಯಾಗೆ ಹಾಯಾಗಿ ಮಲಗವ್ನೆ ಮಾದೇವ....
ಮನಸಿಟ್ಟು ಕೂಗಲು ಬರುತಾನೆ...

ಜಗದೀಶ ಸರ್ವೇಶ ಮಲ್ಲೇಶ ಗೌರೀಶ...
ನೂರಾರು ಹೆಸರು ಶಿವನೀಗೆ...
ನೂರಾರು ಹೆಸರು ನಂಜುಂಡೇಶ್ವರನೀಗೆ...
ಇರುವನು ನೆನೆದೋರ ಮನದಾಗೆ....

ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ...
ಕೋಗಿಲೆ ದನಿಯಾ ಇಂಪಾಗಿ...
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ....
ಕೋಗಿಲೆ ದನಿಯಾ ಇಂಪಾಗಿ....
ಕೋಗಿಲೆ ದನಿಯಾ ಇಂಪಾಗಿ....
ಕೆಳೋರ ಮನಸೀಗೆ ತಂದವ್ನೆ ಆನಂದ....

ಜಗದೀಶ ಸರ್ವೇಶ ಮಲ್ಲೇಶ ಗೌರೀಶ...
ನೂರಾರು ಹೆಸರು ಶಿವನೀಗೆ....
ನೂರಾರು ಹೆಸರು ನಂಜುಂಡೇಶ್ವರನೀಗೆ...
ಇರುವನು ನೆನೆದೋರ ಮನದಾಗೆ....

ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ....
ಎಲ್ಲೆಲ್ಲೂ ನಮ್ಮ ಶಿವನುಂಟು....
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ....
ಎಲ್ಲೆಲ್ಲೂ ನಮ್ಮ ಶಿವನುಂಟು....
ಎಲ್ಲೆಲ್ಲೂ ನಮ್ಮ ಶಿವನುಂಟು....
ಜಗದಲ್ಲಿ ಶರಣರಿಗೆ ಕಾಣೋ ಕಣ್ಣುಂಟು....

ಜಗದೀಶ ಸರ್ವೇಶ ಮಲ್ಲೇಶ ಗೌರೀಶ...
ನೂರಾರು ಹೆಸರು ಶಿವನೀಗೆ...
ನೂರಾರು ಹೆಸರು ನಂಜುಂಡೇಶ್ವರನೀಗೆ....
ಇರುವನು ನೆನೆದೋರ ಮನದಾಗೆ....

No comments:

Post a Comment