Monday, 18 December 2017

Kogileye Kshemave Kannada Song Lyrics

Kogileye Kshemave Kannada Song Lyrics


ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಏಳಿರಿ ಏಳಿರಿ ಮೇಲೆ
ನೇಸರೆ ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ
ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಕಾನನದಲ್ಲಿ ಬೀಸುವ ಗಾಳಿಗೆ ಎಂದು ಆಲಸ್ಯ ಬಂದಿದೆ ಹೇಳೀ
ಬೆಟ್ಟಗಳಲ್ಲಿ ಓಡುವ ನದಿಯು ಎಂದು ದಣಿದು ನಿಂತಿದೆ ಕೇಳೀ
ರಾಗ ಗಳಂತೆ ಮೂಡುವ ಮೇಘಗಳಿಗೆ ಬೇಸರ ಬಂದಿತೆ ಕೇಳೀ
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು ಬರೆನು ಎಂಬುದೆ ಹೇಳೀ

ಭುವನ ತಿರುಗಿದೆ ಓ ಓ ಓ
ಗಗನ ಚಲಿಸಿದೇ
ಕವನ ಕದೆದಿದೆ
ಬದುಕು ಬರೆಸಿದೆ

ಏಳಿರಿ ಏಳಿರಿ ಮೇಲೆ
ನೇಸರೆ ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ
ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ


ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ ಹೊಟ್ಟೆಯ ಬಿರಿಯೆ ತಿಂದವು
ತಪ್ಪಲಿನಲ್ಲಿ ರಂಗಿನ ಅಚ್ಚೆ ಹೊಯ್ದ ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ ದೊಡ್ಡ ಕಣ್ಣಿನ ಮಿಂಚಿನ ಮೌನ

ಕಮಲ ಕುಳಿತೆಯ ಓ ಓ ಓ
ಅಳಿಲೆ ಅವಿತೆಯ
ನವಿಲೆ ನಿನ್ತೆಯ
ಮನಸೆ ಮರೆತೆಯ

ಏಳಿರಿ ಏಳಿರಿ ಮೇಲೆ
ನೇಸರೆ ಬಂದನು ಮೇಲೆ ನೋಡಿ
ಮಣ್ಣಿನ ನೀರಲ್ಲಿ
ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

No comments:

Post a Comment