Monday, 18 December 2017

Mellusiresavi Gaana Kannada Song Lyrics

Mellusiresavi Gaana Kannada Song Lyrics


ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ... ಪ್ರಿಯಾ!

ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ

ಮನದಾಸೆ ದೂಡಿದ ಬಯಕೆ
ಕನಸಾಗಿ ಕಾಡುವುದೇಕೆ?
ಮನದಾಸೆ ದೂಡಿದ ಬಯಕೆ
ಕನಸಾಗಿ ಕಾಡುವುದೇಕೆ?

ಮಧುಮಂಚಕೆ ವಿಧಿಅಂಜಿಕೆ
ಅದಕೇತಕೆ ಅಂಜಿಕೆ ಶಂಕೆ

ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ

ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು
ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು

ಹೋರಾಡಿದೆ ಹಾರಾಡಿದೆ
ಹಾರೈಸಿ ಪ್ರೇಮದ ಹೊನಲು

ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ

ಈ ದೇಹ ರಸಮಯ ಸದನ
ಈ ಮೇಹ ಮಧುಸಂಗ್ರಹಣ

ಈ ದೇಹ ರಸಮಯ ಸದನ
ಈ ಮೇಹ ಮಧುಸಂಗ್ರಹಣ

ಚಿರನೂತನ ರೋಮಾಂಚನ
ದಾಂಪತ್ಯದ ಅನುಸಂಧಾನ

ಮೆಲ್ಲುಸಿರೇ ಸವಿಗಾನ
ಎದೆ ಝಲ್ಲನೆ ಹೂವಿನ ಬಾಣ

No comments:

Post a Comment