Monday, 18 December 2017

E Sogasada Sanje Kannada Song

ಚಿತ್ರ: ದೇವತಾ ಮನುಷ್ಯ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳ ಗುರುರಾಜ್   

ಗಂ:  ಈ ಸೊಗಸಾದ ಸಂಜೆ ।೨।
       ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಗಂ:  ಈ ಸೊಗಸಾದ ಸಂಜೆ

ಗಂ:  ನಲ್ಲೆಯು ಮೂಡಿದ ಮಲ್ಲಿಗೆ ಹೂವು ಪ್ರೇಮದ ಗೀತೆ ಹಾಡಿದೆ ಇಂಪಾಗಿ
       ಕಂಪನ್ನು ಚೆಲ್ಲಿದೆ ಹಿತವಾಗಿ
ಹೆ:   ನಲ್ಲನ ನುಡಿಯು ಕೊಳಲಿನ ಧನಿಯು ಕಾಣೆನು ನಾನು ಕೇಳುತ ಬೆರಗಾಗಿ
       ಸಂತೋಷ ತುಂಬಿತು ಹಾಯಾಗಿ
ಗಂ:  ಓ..... ಪ್ರೇಮದ ಗಂಗೆ ಪ್ರಣಯದ ತುಂಗೆ ನಲ್ಲೆಯ ಮಾತುಗಳೆಲ್ಲ

ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಜೊ: ಈ ಸೊಗಸಾದ ಸಂಜೆ

ಹೆ:   ಗೆಳೆಯೆನೆ ಇಂದು ಕಣ್ಣಲಿ ನಿನ್ನ ಪ್ರೇಮದ ಲೋಕ ನೋಡಿದೆ ನಾನೀಗ
       ನನ್ನಲ್ಲಿ ಮೂಡಿತು ಅನುರಾಗ
ಗಂ:  ಅರಗಿಣಿ ಕೂಡ ನಾಚಿತು ನಿನ್ನ ಮಾತನು ಕೇಳಿ ಹಾರಿದೆ ಓ ಜಾಣೆ
       ನಿನ್ನಂತೆ ಯಾರನು ನಾ ಕಾಣೆ
ಹೆ:   ಓ..... ಬಾಳಲಿ ಸರಸ ತುಂಬಿದ ಕಳಸ ಪ್ರೇಮವು ತುಂಬಿರುವಾಗ

ಗಂ:  ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಜೊ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

Belli Modave Elli Oduve Kannada Song Lyrics

Belli Modave Elli Oduve Kannada Song Lyrics


ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ...
ತಂಗಾಳಿ ಮೈಸೋಕಿ ನಡುಗತಲಿರುವೆ...
ಸಂಗಾತಿ ಎಲ್ಲೆಂದೂ ಹುಡುಕುತಲಿರುವೆ..
ಮೋಹದ ಮೋಡಿಗೆ ಸಿಲುಕಿರುವೆ...
ತೀರದ ದಾಹದಿ ಬಳಲಿರುವೆ...
ಓ ಇನಿಯಾ....ಬಾ ಸನಿಹಾ...
ಎಂದೆನ್ನ ಮನನೊಂದು ಕೂಗಾಡಿದೆ..
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲನ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ..
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ದಿನವೊಂದು ಯುಗವಾಗಿ ಉರುಳುತ್ತಲಿರಲು..
ಬಾಳೆಲ್ಲಾ ಬರಡಾಗಿ ಕಳೆಯುತ್ತಲಿರಲು...
ಜೀವನ ಮೀರುತ ಇರಿಸಿರಲು
ಬೇಸರ ತುಂಬುತ ಬಡಿದಿರಲು
ನೀ ಬರಲು....ಈ ಇರುಳು...
ಆನಂದ ನಮಗೆಂದು ಮನ ಹೇಳಿದೆ...
ಬೆಳ್ಳಿಮೋಡವೆ ಎಲ್ಲಿ ಓಡುವೆ..
ನನ್ನ. ಬಳಿಗೆ ನಲಿದು ಬಾ..
ನನ್ನ. ನಲ್ಲೆಯ ಕಂಡು ಈ ಕ್ಷಣ
ನನ್ನ ಓಲವಾ ತಿಳಿಸಿ ಬಾ...

Santhasa Araluva Samaya Kannada Song lyrics

Santhasa Araluva Samaya Kannada Song lyrics


ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|
ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವಾ
ಶೃಂಗಾರ ಕಾವ್ಯ ರಮ್ಯ |೨| ||ಪಲ್ಲವಿ||

ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ

ಬಿರಿದ ಹೂವು, ನಗುವ ತಾಣ |೨|
ಮಿನುಗೊ ರಂಗು ಭೂಮಿ ಬಾನ
ಇದು ರಮ್ಯ ಚೈತ್ರ ಕಾಲ |೨|

ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವಾ
ಶೃಂಗಾರಕಾವ್ಯ ರಮ್ಯ |೨|

ಚಿಂತೆಯಿರುವ ಮನದಲ್ಲಿ ಮೌನ
ದೂರಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನು |೨|
ಬಾಳು ನಮ್ಮ ಮಧುರ ಗಾನ.....
ಶೃಂಗಾರಕಾವ್ಯ ರಮ್ಯ |೨|


ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕುಸುಮರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ.....
ಇದು ರಮ್ಯ ಚೈತ್ರ ಕಾಲ |೨|

ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|